ಶ್ರೀ ಗುರುಭ್ಯೋ ನಮಃ

ಮಹಾವತಾರಿ ಸದ್ಗುರು ಸುಬ್ರಾಯರ ಜೀವನಲೀಲಾಮೃತವನ್ನು ಗುರುಭಕ್ತರಿಗೆ ಕಿಂಚಿತ್ ಉಣಬಡಿಸುವ ಸೇವೆಯನ್ನು ಈ ಜಾಲತಾಣದ ಮೂಲಕ ಮಾಡಲಾಗುವುದು. ಗುರುಭಕ್ತರು ಇಲ್ಲಿರುವ ವಿಷಯವಸ್ತುವಿನ (ಗುರುದೇವನ ದಿವ್ಯವಾದ ಪ್ರವಚನಗಳ, ಗುರುದೇವನು ಬರೆದ ಪುಸ್ತಕಗಳ, ಗುರುಗಳ ವಿಡಿಯೋಗಳ, ಸದ್ಗುರುವಿನ ಫೋಟೋಗಳ) ಉಪಯೋಗವನ್ನು ತೆಗೆದುಕೊಂಡು, ಶ್ರೀಗುರುತತ್ತ್ವವನ್ನು ಇನ್ನಷ್ಟು ಪ್ರೀತಿಸುವಂತಾಗಿ, ಗುರುಗಳ ಕೃಪೆಗೆ ಪಾತ್ರರಾಗಿ ಎಂದು ಕೋರಿಕೆ. ಈ ಜಾಲತಾಣದ “ಬ್ಲಾಗ್” ಅಂಕಣದಲ್ಲಿ ಕಾಲಕಾಲಕ್ಕೆ ಗುರುಗಳ ಕುರಿತಾಗಿ, ಗುರುಗಳ ಪವಿತ್ರ ಆಶ್ರಮವಾದ “ಸಿದ್ಧವನ”ದ ಬಗ್ಗೆ ಲೇಖನಗಳನ್ನು ಪ್ರಕಟಿಸಲಾಗುವುದು. ಆಸಕ್ತರು ಅವುಗಳನ್ನೂ ಓದಬಹುದು. ಸದ್ಗುರು ಭಗವಂತನು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ.

ಗುರು ದರ್ಶನ
Blog
ಗುರುವಿನ ಆಶ್ರಮಗಳು